ಐಪಿಎಲ್ ಕಾಮೆಂಟರಿ ಬಾಕ್ಸ್‌ನಲ್ಲಿ ಡಾ.ರಾಜ್ ಹಾಡು ಹಾಡಿದ ವೆಂಕಿ..!

0


ಮುಂಬೈ, ಮೇ 9: ಭಾರತ ಕ್ರಿಕೆಟ್ ತಂಡದ ಮಾಜಿ ಮಧ್ಯಮ ವೇಗದ ಬೌಲರ್ ಕನ್ನಡಿಗ ವೆಂಕಟೇಶ್ ಪ್ರಸಾದ್ ಐಪಿಎಲ್-12 ಟೂರ್ನಿಯಲ್ಲಿ ಸ್ಟಾರ್ ಸ್ಪೋರ್ಟ್ಸ್ ಕನ್ನಡ ವಾಹಿನಿಯಲ್ಲಿ ಕಾಮೆಂಟೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವೆಂಕಟೇಶ್ ಪ್ರಸಾದ್ ಅವರ ಜೊತೆ ಕನ್ನಡಿಗರಾದ ವಿಜಯ್ ಭಾರದ್ವಾಜ್, ಸುಜಿತ್ ಸೋಮಸುಂದರ್, ಸುನಿಲ್ ಜೋಶಿ, ಜಿ.ಕೆ ಅನಿಲ್ ಕುಮಾರ್ ಮತ್ತು ಶ್ರೀನಿವಾಸ್ ಮೂರ್ತಿ ಕೂಡ ಕನ್ನಡ ಕಾಮೆಂಟೇಟರ್ಸ್ ತಂಡದಲ್ಲಿದ್ದಾರೆ,

ಇಂಟ್ರೆಸ್ಟಿಂಗ್ ವಿಷ್ಯ ಏನಂದ್ರೆ ಕಾಮೆಂಟರಿ ಮಾಡುವ ಸಂದರ್ಭದಲ್ಲಿ ವೆಂಕಟೇಶ್ ಪ್ರಸಾದ್, ಕನ್ನಡದ ಮೇರು ನಟ ಡಾ.ರಾಜ್ ಕುಮಾರ್ ಹಾಡಿರುವ ಹಾಡೊಂದನ್ನು ಹಾಡಿ ಗಮನ ಸೆಳೆದಿದ್ದಾರೆ. ರೆಬೆಲ್ ಸ್ಟಾರ್ ಅಂಬರೀಶ್ ಅಭಿನಯದ ಹೃದಯ ಹಾಡಿತು ಚಿತ್ರದಲ್ಲಿ ‘ನಲಿಯುತ ಹೃದಯ ಹಾಡನು ಹಾಡಿದೆ’ ಎಂಬ ಹಾಡನ್ನು ಡಾ.ರಾಜ್ ಹಾಡಿದ್ದರು. ಆ ಹಾಡನ್ನು ಕಾಮೆಂಟರಿ ಬಾಕ್ಸ್ ನಲ್ಲಿ ವೆಂಕಟೇಶ್ ಪ್ರಸಾದ್ ಹಾಡಿದ್ದಾರೆ. ವೆಂಕಿ ಹಾಡನ್ನು ವಿಜಯ್ ಭಾರದ್ವಾಜ್ ತಮ್ಮ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿದ್ದಾರೆ.

ವೆಂಕಟೇಶ್ ಪ್ರಸಾದ್ ಅವರ ಹಾಡಿನ ಮೋಡಿಯನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

LEAVE A REPLY

Please enter your comment!
Please enter your name here

2 × two =