ವಿಜಯ್ ಹಜಾರೆ ಟ್ರೋಫಿ: ಆತಿಥೇಯ ಕರ್ನಾಟಕಕ್ಕೆ ಜಾರ್ಖಂಡ್ ಎದುರಾಳಿ

0

ಬೆಂಗಳೂರು, ಸಪ್ಟೆಂಬರ್ 25: ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿಯ ತನ್ನ 2ನೇ ಪಂದ್ಯದಲ್ಲಿ ಆತಿಥೇಯ ಕರ್ನಾಟಕ ತಂಡ ಜಾರ್ಖಂಡ್ ಸವಾಲನ್ನು ಎದುರಿಸಲಿದೆ.

ಈ ಪಂದ್ಯ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಕರ್ನಾಟಕ ತಂಡ ಟೂರ್ನಿಯಲ್ಲಿ ಮೊದಲ ಗೆಲುವಿನ ನಿರೀಕ್ಷೆಯಲ್ಲಿದೆ. ಆಲೂರು ಕ್ರೀಡಾಂಗಣದಲ್ಲಿ ನಡೆದಿದ್ದ ಹೈದರಾಬಾದ್ ವಿರುದ್ಧದ ಮೊದಲ ಪಂದ್ಯ ಮಳೆಯ ಕಾರಣ ರದ್ದಾಗಿತ್ತು. ಹೀಗಾಗಿ ಜಾರ್ಖಂಡ್ ವಿರುದ್ಧದ ಪಂದ್ಯವನ್ನು ಗೆಲ್ಲುವ ಮೂಲಕ ಮನೀಶ್ ಪಾಂಡೆ ನಾಯಕತ್ವದ ಕರ್ನಾಟಕ ಟೂರ್ನಿಯಲ್ಲಿ ಮೊದಲ ಗೆಲುವನ್ನು ಎದುರು ನೋಡುತ್ತಿದೆ.

ಇದನ್ನೂ ಓದಿ: ನಾಳೆಯಿಂದ ವಿಜಯ್ ಹಜಾರೆ ಟ್ರೋಫಿ: ಇಲ್ಲಿದೆ ಕರ್ನಾಟಕ ತಂಡದ ಕಂಪ್ಲೀಟ್ ಡೀಟೇಲ್ಸ್

 ಭಾರತ ಟೆಸ್ಟ್ ತಂಡದಿಂದ ಹೊರ ಬಿದ್ದಿರುವ ಕೆ.ಎಲ್ ರಾಹುಲ್, ನಾಯಕ ಮನೀಶ್ ಪಾಂಡೆ, ದೇವದತ್ತ್ ಪಡಿಕ್ಕಲ್, ಕೆ.ವಿ ಸಿದ್ಧಾರ್ಥ್, ಪವನ್ ದೇಶಪಾಂಡೆ, ಆಲ್ರೌಂಡರ್ ಶ್ರೇಯಸ್ ಗೋಪಾಲ್ ಕರ್ನಾಟಕ ತಂಡದ ಬ್ಯಾಟಿಂಗ್ ಶಕ್ತಿಯಾಗಿದ್ದಾರೆ. ದಾವಣಗೆರೆ ಎಕ್ಸ್ಪ್ರೆಸ್ ಆರ್.ವಿನಯ್ ಕುಮಾರ್ ಪಾಂಡಿಚೇರಿಗೆ ವಲಸೆ ಹೋಗಿದ್ದು, ಅವರ ಅನುಪಸ್ಥಿತಿಯಲ್ಲಿ ಬೌಲಿಂಗ್ ಪಡೆಯನ್ನು ಪೀಣ್ಯ ಎಕ್ಸ್ಪ್ರೆಸ್ ಅಭಿಮನ್ಯು ಮಿಥುನ್ ಮುನ್ನಡೆಸಲಿದ್ದಾರೆ. ಯುವ ವೇಗಿಗಳಾದ ಎಂ.ಪ್ರಸಿದ್ಧ್ ಕೃಷ್ಣ, ವಿ.ಕೌಶಿಕ್, ಆಲ್ರೌಂಡರ್ಗಳಾದ ಶ್ರೇಯಸ್ ಗೋಪಾಲ್, ಕೆ.ಗೌತಮ್ ತಂಡಕ್ಕೆ ಬಲ ತುಂಬಲಿದ್ದಾರೆ.

ಕರುಣ್ ನಾಯರ್ ಮತ್ತು ಮಯಾಂಕ್ ಅಗರ್ವಾಲ್ ದಕ್ಷಿಣ ಆಫ್ರಿಕಾ ವಿರುದ್ಧದ ಅಭ್ಯಾಸ ಪಂದ್ಯಕ್ಕಾಗಿ ಭಾರತ ‘’ ತಂಡದಲ್ಲಿ ಸ್ಥಾನ ಪಡೆದಿರುವ ಕಾರಣ ಆರಂಭದ ಕೆಲ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ. 

ಕರ್ನಾಟಕ ತಂಡಮನೀಶ್ ಪಾಂಡೆ (ನಾಯಕ), ಕೆ.ಎಲ್ ರಾಹುಲ್ (ಉಪನಾಯಕ), ದೇವದತ್ ಪಡಿಕ್ಕಲ್, ಸಿದ್ಧಾರ್ಥ್ ಕೆ.ವಿ., ಪ್ರವೀಣ್ ದುಬೆ, ಪವನ್ ದೇಶಪಾಂಡೆ, ಅಭಿಷೇಕ್ ರೆಡ್ಡಿ, ಕೆ.ಗೌತಮ್, ಜೆ.ಸುಚಿತ್, ಶ್ರೇಯಸ್ ಗೋಪಾಲ್, ಅಭಿಮನ್ಯು ಮಿಥುನ್, ಎಂ.ಪ್ರಸಿದ್ಧ್ ಕೃಷ್ಣ, ರೋನಿತ್ ಮೋರೆ, ಶರತ್ ಶ್ರೀನಿವಾಸ್(ವಿಕೆಟ್ ಕೀಪರ್), ವಿ.ಕೌಶಿಕ್. ಕೋಚ್ಯರೇ ಗೌಡ, ಬೌಲಿಂಗ್ ಕೋಚ್ಎಸ್.ಅರವಿಂದ್, ಫೀಲ್ಡಿಂಗ್ ಕೋಚ್ಶಬರೀಶ್ ಪಿ.ಮೋಹನ್, ಮ್ಯಾನೇಜರ್ಅನುತೋಷ್ ಪಾಲ್, ಲಾಜಿಸ್ಟಿಕ್ ಮ್ಯಾನೇಜರ್ಎ.ರಮೇಶ್ ರಾವ್, ಫಿಸಿಯೊಜಾಬ ಪ್ರಭು.

ಜಾರ್ಖಂಡ್ ತಂಡ: ಇಶಾನ್ ಕಿಶನ್ (ನಾಯಕ, ವಿಕೆಟ್ ಕೀಪರ್), ವರುಣ್ ಆರೋನ್, ಆನಂದ್ ಸಿಂಗ್, ಕುಮಾರ್ ದೇವವ್ರತ್, ಇಶಾಂಕ್ ಜಗ್ಗಿ, ಶುಭಂ ಕುಮಾರ್ ಸಿಂಗ್, ಮೋನು ಕುಮಾರ್, ಶಹಬಾಜ್ ನದೀಮ್, ರಾಹುಲ್ ಶುಕ್ಲಾ, ಅನುಕುಲ್ ರಾಯ್, ಸುಮಿತ್ ಕುಮಾರ್, ಅತುಲ್ ಸಿಂಗ್, ವಿವೇಕಾನಂದ್ ತಿವಾರಿ, ಉತ್ಕರ್ಷ್ ಸಿಂಗ್, ವಿರಾಟ್ ಸಿಂಗ್.

LEAVE A REPLY

Please enter your comment!
Please enter your name here

5 − three =