ವಿಜಯ್ ಹಜಾರೆ: ನಾಳೆ ಕರ್ನಾಟಕ Vs ಪುದುಚೇರಿ ಕ್ವಾರ್ಟರ್ ಫೈನಲ್.. ಸ್ಟಾರ್ ಸ್ಪೋರ್ಟ್ಸ್‌ನಲ್ಲಿ Live

0

ಬೆಂಗಳೂರು, ಅಕ್ಟೋಬರ್ 19: ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿ ನಾಕೌಟ್ ಹಂತಕ್ಕೆ ತಲುಪಿದ್ದು, ಮೂರು ಬಾರಿಯ ಚಾಂಪಿಯನ್ ಕರ್ನಾಟಕ ತಂಡ ಭಾನುವಾರ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪುದುಚೇರಿ ತಂಡವನ್ನು ಎದುರಿಸಲಿದೆ.

ಮನೀಶ್ ಪಾಂಡೆ ನಾಯಕತ್ವದ ಕರ್ನಾಟಕ ತಂಡ ಲೀಗ್ ಹಂತದಲ್ಲಿ ಆಡಿದ 8 ಪಂದ್ಯಗಳಲ್ಲಿ 7ನ್ನು ಗೆದ್ದು, ಒಂದರಲ್ಲಿ ಸೋತು 28 ಅಂಕಗಳೊಂದಿಗೆ ಎಲೈಟ್ ಗುಂಪಿನಲ್ಲಿ ಅಗ್ರಸ್ಥಾನ ಪಡೆದಿತ್ತು. ಕರ್ನಾಟಕದ ಮಾಜಿ ಕೋಚ್ ಜೆ.ಅರುಣ್ ಕುಮಾರ್ ಗರಡಿಯಲ್ಲಿ ಪಳಗಿರುವ ಪುದುಚೇರಿ ತಂಡ 9 ಲೀಗ್ ಪಂದ್ಯಗಳಲ್ಲಿ 7ನ್ನು ಗೆದ್ದು ಅಜೇಯ ಸಾಧನೆ ಮಾಡಿದೆ. ಪುದುಚೇರಿ ತಂಡದ ಉಳಿದ ಎರಡು ಪಂದ್ಯಗಳು ಮಳೆಯಿಂದ ರದ್ದಾಗಿದ್ದವು. ಕರ್ನಾಟಕ ತಂಡದ ಮಾಜಿ ನಾಯಕ ಆರ್.ವಿನಯ್ ಕುಮಾರ್ ಪುದುಚೇರಿ ತಂಡದ ಆಟಗಾರ/ಮಾರ್ಗದರ್ಶಕ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ಕರ್ನಾಟಕ ತಂಡದಲ್ಲಿ ಯುವ ಬೌಲರ್ಗಳಿಗೆ ಅವಕಾಶ ಮಾಡಿ ಕೊಡುವ ನಿಟ್ಟಿನಲ್ಲಿ ರಾಜ್ಯ ತಂಡವನ್ನು ತೊರೆದಿರುವ ವಿನಯ್ ಪುದುಚೇರಿ ಪರ ಆಡುತ್ತಿದ್ದಾರೆ.

ಕರ್ನಾಟಕ Vs ಪುದುಚೇರಿ ನಡುವಿನ ಪಂದ್ಯ ಕರ್ನಾಟಕ Vs ವಿನಯ್ ಕುಮಾರ್ ನಡುವಿನ ಕದನವೆಂದೇ ಬಿಂಬಿತವಾಗಿದೆ. ವಿನಯ್ ಕುಮಾರ್ ನಾಯಕತ್ವದಲ್ಲಿ ಕರ್ನಾಟಕ ತಂಡ 2013-14 ಹಾಗೂ 2014-15ನೇ ಸಾಲಿನಲ್ಲಿ ಸತತವಾಗಿ ಎರಡು ಬಾರಿ ರಣಜಿ ಟ್ರೋಫಿ, ಇರಾನಿ ಕಪ್ ಮತ್ತು ವಿಜಯ್ ಹಜಾರೆ ಟ್ರೋಫಿಗಳನ್ನು ಮುಡಿಗೇರಿಸಿಕೊಂಡಿತ್ತು. ಆಗ ಆಗಿನ ಪುದುಚೇರಿ ತಂಡದ ಕೋಚ್ ಜೆ.ಅರುಣ್ ಕುಮಾರ್ ಕರ್ನಾಟಕ ತಂಡದ ಬ್ಯಾಟಿಂಗ್ ಕೋಚ್ ಆಗಿದ್ದರು.

2013-14 ಹಾಗೂ 2014-15ರಲ್ಲಿ ವಿಜಯ್ ಹಜಾರೆ ಟ್ರೋಫಿ ಗೆದ್ದಿದ್ದ ಕರ್ನಾಟಕ ತಂಡ 2017-18ನೇ ಸಾಲಿನಲ್ಲೂ ಚಾಂಪಿಯನ್ ಆಗಿತ್ತು.

ಕರ್ನಾಟಕ Vs ಪುದುಚೇರಿ ಕ್ವಾರ್ಟರ್ ಫೈನಲ್ Match Starts: ಬೆಳಕ್ಕೆ 9 ಗಂಟೆಗೆ       Venue: ಎಂ.ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು Live: ಸ್ಟಾರ್ ಸ್ಪೋರ್ಟ್ಸ್ 2 (Star Sports 2)

ತಂಡಗಳು ಹೀಗಿವೆ

ಕರ್ನಾಟಕ: ಮನೀಶ್ ಪಾಂಡೆ(ನಾಯಕ), ಕೆ.ಎಲ್ ರಾಹುಲ್(ಉಪನಾಯಕ), ದೇವದತ್ ಪಡಿಕ್ಕಲ್, ಕರುಣ್ ನಾಯರ್, ರೋಹನ್ ಕದಂ, ಅಭಿಷೇಕ್ ರೆಡ್ಡಿ, ಬಿ.ಆರ್ ಶರತ್(ವಿಕೆಟ್ ಕೀಪರ್), ಕೆ.ಗೌತಮ್, ಶ್ರೇಯಸ್ ಗೋಪಾಲ್, ಜೆ.ಸುಚಿತ್, ಪ್ರವೀಣ್ ದುಬೆ, ಅಭಿಮನ್ಯು ಮಿಥುನ್, ಎಂ.ಪ್ರಸಿದ್ಧ್ ಕೃಷ್ಣ, ರೋನಿತ್ ಮೋರೆ, ವಿ.ಕೌಶಿಕ್. ಬ್ಯಾಟಿಂಗ್ ಕೋಚ್: ಯರೇ ಗೌಡ, ಬೌಲಿಂಗ್ ಕೋಚ್: ಎಸ್.ಅರವಿಂದ್.

ಪುದುಚೇರಿ: ಡಿ.ರೋಹಿತ್(ನಾಯಕ), ಆರ್.ವಿನಯ್ ಕುಮಾರ್, ಅಬ್ದುಲ್ ಸಫರ್, ಪರಾಸ್ ಡೊಗ್ರಾ, ಸುಬ್ರಮಣ್ಯನ್ ಆನಂದ್, ಕೆ.ಬಿ ಅರುಣ್ ಕಾರ್ತಿಕ್, ಫಾಬಿದ್ ಅಹ್ಮದ್, ಇಕ್ಬಾಲ್ ನಾಹ, ಎಸ್.ಕಾರ್ತಿಕ್, ಸುರೇಶ್ ಕುಮಾರ್, ವಿಘ್ನೇಶ್ವರನ್ ಮಾರಿಮುತ್ತು, ಆಶಿತ್ ರಾಜೀವ್, ಸಂತ ಮೂರ್ತಿ, ಸಾಗರ್ ತ್ರಿವೇದಿ, ಸಾಗರ್ ಉದೇಶಿ. ಕೋಚ್: ಜೆ.ಅರುಣ್ ಕುಮಾರ್.

LEAVE A REPLY

Please enter your comment!
Please enter your name here

sixteen + 3 =