ವಿಜಯ್ ಹಜಾರೆ ಟ್ರೋಫಿ: ಮಳೆ ಎಫೆಕ್ಟ್, ಪರಿಷ್ಕೃತ ವೇಳಾಪಟ್ಟಿ ಪ್ರಕಟ

0
PC: Facebook

ಬೆಂಗಳೂರು, ಸಪ್ಟೆಂಬರ್ 27: ಬೆಂಗಳೂರಿನಲ್ಲಿ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿ ಟೂರ್ನಿಯ ಎಲೈಟ್ ಗುಂಪಿನ ಪಂದ್ಯಗಳಿಗೆ ಮಳೆ ಅಡಚಣೆ ಎದುರಾಗಿರುವುದರಿಂದ ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.

ಸಪ್ಟೆಂಬರ್ 24ರಂದು ಆಲೂರಿನ ಕೆಎಸ್ಸಿಎ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಆತಿಥೇಯ ಕರ್ನಾಟಕ Vsಹೈದರಾಬಾದ್ ಸಹಿತ ಹಲವಾರು ಪಂದ್ಯಗಳು ಮಳೆಯಿಂದಾಗಿ ರದ್ದಾಗಿದ್ದವು. ಬೆಂಗಳೂರು ಮತ್ತು ವಡೋದರದಲ್ಲಿ ನಡೆಯಬೇಕಿರುವ ಪಂದ್ಯಗಳಿಗೆ ಮಳೆಯ ಅಡಚಣೆ ಎದುರಾಗಿದ್ದು, ಮೊದಲು ಮೂರು ದಿನಗಳಲ್ಲಿ 30 ಪಂದ್ಯಗಳ ಪೈಕಿ 17 ಪಂದ್ಯಗಳು ಮಳೆಯಿಂದಾಗಿ ರದ್ದಾಗಿವೆ. ಹೀಗಾಗಿ ಬಿಸಿಸಿಐ ಮರು ವೇಳಾಪಟ್ಟಿ ಪ್ರಕಟಿಸಿದೆ.

ಗುರವಾರ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ತನ್ನ 2ನೇ ಪಂದ್ಯದಲ್ಲಿ ಕರ್ನಾಟಕ ತಂಡ ಜಾರ್ಖಂಡ್ ವಿರುದ್ಧ 123 ರನ್ಗಳ ಭರ್ಜರಿ ಗೆಲುವು ದಾಖಲಿಸಿತ್ತು. ಈ ಹಿಂದಿನ ವೇಳಾಪಟ್ಟಿಯ ಪ್ರಕಾರ ಆತಿಥೇಯ ಕರ್ನಾಟಕ ಶನಿವಾರ ಛತ್ತೀಸ್ಗಢ ಮತ್ತು ಭಾನುವಾರ ಮುಂಬೈ ವಿರುದ್ಧ ಆಡಬೇಕಿತ್ತು.

ವಿಜಯ್ ಹಜಾರೆ ಟ್ರೋಫಿ: ಕರ್ನಾಟಕದ ಪಂದ್ಯಗಳ ಪರಿಷ್ಕೃತ ವೇಳಾಪಟ್ಟಿ

ಸಪ್ಟೆಂಬರ್ 28: ಕರ್ನಾಟಕ Vs ಕೇರಳ (ಎಂ.ಚಿನ್ನಸ್ವಾಮಿ ಕ್ರೀಡಾಂಗಣ)

ಅಕ್ಟೋಬರ್ 1: ಕರ್ನಾಟಕ Vs ಹೈದರಾಬಾದ್ (KSCA ಆಲೂರು ಕ್ರೀಡಾಂಗಣ)

ಅಕ್ಟೋಬರ್ 2: ಕರ್ನಾಟಕ Vs ಛತ್ತೀಸ್ಗಢ (ಎಂ.ಚಿನ್ನಸ್ವಾಮಿ ಕ್ರೀಡಾಂಗಣ)

ಅಕ್ಟೋಬರ್ 7: ಕರ್ನಾಟಕ Vs ಆಂಧ್ರ (ಜಸ್ಟ್ ಕ್ರಿಕೆಟ್ ಕ್ರೀಡಾಂಗಣ)

ಅಕ್ಟೋಬರ್ 10: ಕರ್ನಾಟಕ Vs ಮುಂಬೈ (ಎಂ.ಚಿನ್ನಸ್ವಾಮಿ ಕ್ರೀಡಾಂಗಣ)

ಅಕ್ಟೋಬರ್ 12: ಕರ್ನಾಟಕ Vs ಸೌರಾಷ್ಟ್ರ (ಎಂ.ಚಿನ್ನಸ್ವಾಮಿ ಕ್ರೀಡಾಂಗಣ)

ಅಕ್ಟೋಬರ್ 16: ಕರ್ನಾಟಕ Vs ಗೋವಾ (KSCA ಆಲೂರು ಕ್ರೀಡಾಂಗಣ)

LEAVE A REPLY

Please enter your comment!
Please enter your name here

18 + 14 =