ವಿಜಯ್ ಹಜಾರೆ ಟ್ರೋಫಿ: ಪುದುಚೇರಿ ವಿರುದ್ಧ ಕ್ವಾರ್ಟರ್ ಫೈನಲ್‌ಗೆ ಕರ್ನಾಟಕ ತಂಡ ಪ್ರಕಟ

0

ಬೆಂಗಳೂರು, ಅಕ್ಟೋಬರ್ 18: ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿಯ ಪುದುಚೇರಿ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯಕ್ಕೆ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದೆ. ಲೀಗ್ ಹಂತದಲ್ಲಿ ಆಡಿದ ತಂಡವನ್ನೇ ನಾಕೌಟ್ ಪಂದ್ಯಕ್ಕೂ ಉಳಿಸಿಕೊಳ್ಳಲಾಗಿದ್ದು, ಸತತ ವೈಫಲ್ಯ ಎದುರಿಸುತ್ತಿರುವ ಕರುಣ್ ನಾಯರ್ ಅವರಿಗೆ ಮತ್ತೊಂದು ಅವಕಾಶ ನೀಡಲಾಗಿದೆ. ಪುದುಚೇರಿ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯ ಭಾನುವಾರ ಬೆಳಗ್ಗೆ 9 ಗಂಟೆಗೆ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ.

ಬಲಗೈ ಬ್ಯಾಟ್ಸ್ಮನ್ ಕರುಣ್ ನಾಯರ್ ಈ ಬಾರಿಯ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಆಡಿದ 6 ಪಂದ್ಯಗಳಿಂದ ಕೇವಲ 66 ರನ್ ಗಳಿಸಿದ್ದಾರೆ. ಇನ್ನು 3 ಬಾರಿಯ ಚಾಂಪಿಯನ್ ಕರ್ನಾಟಕ ತಂಡ ಲೀಗ್ ಹಂತತದಲ್ಲಿ ಆಡಿದ 8 ಪಂದ್ಯಗಳಲ್ಲಿ 7 ಗೆಲುವು ಹಾಗೂ 1 ಸೋಲಿನೊಂದಿಗೆ 28 ಅಂಕ ಗಳಿಸಿ ಎಲೈಟ್ ಗುಂಪಿನಲ್ಲಿ ಅಗ್ರಸ್ಥಾನ ಪಡೆದಿತ್ತು. ಪುದುಚೇರಿ ತಂಡ ಪ್ಲೇ ಹಂತದಲ್ಲಿ ಆಡಿದ 9 ಪಂದ್ಯಗಳಲ್ಲಿ 7ರಲ್ಲಿ ಗೆದ್ದಿತ್ತು. 2 ಪಂದ್ಯಗಳು ಮಳೆಯಿಂದ ರದ್ದಾಗಿದ್ದವು. ಕರ್ನಾಟಕ ತಂಡದ ಮಾಜಿ ನಾಯಕ ಆರ್.ವಿನಯ್ ಕುಮಾರ್ ಪುದುಚೇರಿ ತಂಡದ ಪರ ಆಡುತ್ತಿದ್ದಾರೆ. ರಾಜ್ಯ ತಂಡದ ಮಾಜಿ ಕೋಚ್ ಆಗಿರುವ ಜೆ.ಅರುಣ್ ಕುಮಾರ್ ಪುದುಚೇರಿ ತಂಡದ ಕೋಚ್ ಆಗಿದ್ದಾರೆ. ವಿನಯ್ ನಾಯಕ ಹಾಗೂ ಅರುಣ್ ಕೋಚ್ ಆಗಿದ್ದಾಗ ಕರ್ನಾಟಕ ತಂಡ 2013-14 ಹಾಗೂ 2014-15ನೇ ಸಾಲಿನಲ್ಲಿ ಸತತವಾಗಿ ಎರಡು ಬಾರಿ ರಣಜಿ ಟ್ರೋಫಿ, ಇರಾನಿ ಕಪ್ ಮತ್ತು ವಿಜಯ್ ಹಜಾರೆ ಟ್ರೋಫಿಗಳನ್ನು ಗೆದ್ದಿತ್ತು.

ಪುದುಚೇರಿ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯಕ್ಕೆ ಕರ್ನಾಟಕ ತಂಡ: ಮನೀಶ್ ಪಾಂಡೆ(ನಾಯಕ), ಕೆ.ಎಲ್ ರಾಹುಲ್(ಉಪನಾಯಕ), ದೇವದತ್ ಪಡಿಕ್ಕಲ್, ಕರುಣ್ ನಾಯರ್, ರೋಹನ್ ಕದಂ, ಅಭಿಷೇಕ್ ರೆಡ್ಡಿ, ಬಿ.ಆರ್ ಶರತ್(ವಿಕೆಟ್ ಕೀಪರ್), ಕೆ.ಗೌತಮ್, ಶ್ರೇಯಸ್ ಗೋಪಾಲ್, ಜೆ.ಸುಚಿತ್, ಪ್ರವೀಣ್ ದುಬೆ, ಅಭಿಮನ್ಯು ಮಿಥುನ್, ಎಂ.ಪ್ರಸಿದ್ಧ್ ಕೃಷ್ಣ, ರೋನಿತ್ ಮೋರೆ, ವಿ.ಕೌಶಿಕ್.

 

LEAVE A REPLY

Please enter your comment!
Please enter your name here

12 + three =