ವಿಶ್ವಕಪ್ 2019: ವಿಜಯ್ ಶಂಕರ್ ಔಟ್, ಕನ್ನಡಿಗ ಮಯಾಂಗ್ ಅಗರ್ವಾಲ್ ಇನ್

0

ಬೆಂಗಳೂರು, ಜುಲೈ 1: ಕರ್ನಾಟಕದ ಸ್ಟಾರ್ ಬ್ಯಾಟ್ಸ್’ಮನ್ ಮಯಾಂಕ್ ಅಗರ್ವಾಲ್ ಅವರಿಗೆ ಮತ್ತೊಂದು ಅದೃಷ್ಠ ಖುಲಾಯಿಸಿದೆ. ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ತಮಿಳುನಾಡಿನ ಆಲ್ರೌಂಡರ್ ವಿಜಯ್ ಶಂಕರ್ ಗಾಯಗೊಂಡಿದ್ದು, ಟೂರ್ನಿಯಿಂದ ಹೊರ ಬಿದ್ದಿದ್ದಾರೆ. ವಿಜಯ್ ಶಂಕರ್ ಸ್ಥಾನದಲ್ಲಿ ಮಯಾಂಕ್ ಅಗರ್ವಾಲ್ ಅವಕಾಶ ಪಡೆದಿದ್ದು, ಸದ್ಯದಲ್ಲೇ ಇಂಗ್ಲೆಂಡ್’ಗೆ ಪ್ರಯಾಣಿಸಲಿದ್ದಾರೆ.

PC: BCCI

ನೆಟ್ಸ್’ನಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿದ್ದಾಗ ವೇಗಿ ಜಸ್ಪ್ರೀತ್ ಬುಮ್ರಾ ಅವರ ಯಾರ್ಕರ್ ಎಸೆತವೊಂದು ವಿಜಯ್ ಶಂಕರ್ ಅವರ ಪಾದಕ್ಕೆ ಬಡಿದು ಗಾಯವಾಗಿತ್ತು. 28 ವರ್ಷದ ಮಯಾಂಕ್ ಅಗರ್ವಾಲ್ ಕಳೆದ ವರ್ಷವಷ್ಟೇ ಟೆಸ್ಟ್ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದರು. ಸದ್ಯ ವಿಶ್ವಕಪ್’ನಲ್ಲಿ ಆಡುತ್ತಿರುವ ಟೀಮ್ ಇಂಡಿಯಾದಲ್ಲಿ ಬ್ಯಾಕಪ್ ಓಪನರ್ ಇಲ್ಲದಿರುವ ಕಾರಣ ಮಯಾಂಕ್ ಅಗರ್ವಾಲ್ ಅವರಿಗೆ ಅವಕಾಶ ಕಲ್ಪಿಸಲಾಗಿದೆ.

 

 

LEAVE A REPLY

Please enter your comment!
Please enter your name here

twenty − ten =