ವಿರಾಟ್ The Run Machine.. ಒಂದೇ ಪಂದ್ಯದಲ್ಲಿ ಬರೆದ ದಾಖಲೆಗಳೆಷ್ಟು ಗೊತ್ತಾ..?

0
PC: BCCI/Twitter

ನಾಗ್ಪುರ, ಮಾರ್ಚ್ 5: ಮಾಡರ್ನ್ ಮಾಸ್ಟರ್ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧ 2ನೇ ಏಕದಿನ ಪಂದ್ಯದಲ್ಲಿ ಭರ್ಜರಿ ಶತಕ ಬಾರಿಸಿ ಭಾರತ ಗೆಲುವಿಗೆ ಕಾರಣರಾಗಿದ್ದಾರೆ.

ವಿದರ್ಭ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ 120 ಎಸೆತಗಳಲ್ಲಿ 10 ಬೌಂಡರಿಗಳ ನೆರವಿನಿಂದ 116 ರನ್ ಗಳಿಸಿ ಭಾರತಕ್ಕೆ ಗೆಲುವು ತಂದುಕೊಟ್ಟರು. ಇದು ಏಕದಿನ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಕೊಹ್ಲಿ ಗಳಿಸಿದ 40ನೇ ಶತಕ. ಈ ಮೂಲಕ ಏಕದಿನ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ಶತಕ ಬಾರಿಸಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ (49 ಶತಕ) ಅವರ ವಿಶ್ವದಾಖಲೆಗೆ ಕೊಹ್ಲಿ ಮತ್ತಷ್ಟು ಹತ್ತಿರವಾಗಿದ್ದಾರೆ. ಸಚಿನ್ 463 ಏಕದಿನ ಪಂದ್ಯಗಳಲ್ಲಿ 49 ಶತಕ ದಾಖಲಿಸಿದ್ದರೆ, ಕೊಹ್ಲಿ ಕೇವಲ 224 ಪಂದ್ಯಗಳಲ್ಲಿ 40 ಶತಕ ದಾಖಲಿಸಿದ್ದಾರೆ. 3ನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್ 375 ಪಂದ್ಯಗಳಲ್ಲಿ 30 ಶತಕ ಬಾರಿಸಿದ್ದಾರೆ.

ಇದು ಆಸ್ಟ್ರೇಲಿಯಾ ವಿರುದ್ಧ ವಿರಾಟ್ ಕೊಹ್ಲಿ ಗಳಿಸಿರುವ 7ನೇ ಶತಕ ಮತ್ತು 2019ರಲ್ಲಿ ಗಳಿಸಿದ 2ನೇ ಶತಕ. ಅಲ್ಲದೆ ಏಕದಿನ ಕ್ರಿಕೆಟ್ ನಲ್ಲಿ ನಾಯಕನಾಗಿ ವಿರಾಟ್ ಕೊಹ್ಲಿ 9 ಸಾವಿರ ರನ್ ಪೂರ್ತಿಗೊಳಿಸಿದರು. ಇದರ ಜೊತೆಗೆ ಏಕದಿನ ನಾಯಕನಾಗಿ ವಿರಾಟ್ ವೇಗವಾಗಿ 4000, 5000, 6000, 7000, 8000 ಮತ್ತು 9000 ಸಾವಿರ ರನ್ ಗಳನ್ನು ಪೂರ್ತಿಗೊಳಿಸಿದ ವಿಶ್ವದಾಖಲೆಯನ್ನೂ ತಮ್ಮದಾಗಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here

eleven + fourteen =