ಕಿಂಗ್ ಕೊಹ್ಲಿಯನ್ನು ಮೈದಾನದಲ್ಲೇ ಬಿಗಿದಪ್ಪಿದ ಬಾಲಿವುಡ್ ನಟಿ..!

0

ಮ್ಯಾಂಚೆಸ್ಟರ್, ಜೂನ್ 19: ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡವಾಗಿರುವ ಭಾರತ ತಂಡವನ್ನು ನಾಯಕ ವಿರಾಟ್ ಕೊಹ್ಲಿ ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಅದರಲ್ಲೂ ಜೂನ್ 16ರಂದು ಮ್ಯಾಂಚೆಸ್ಟರ್ನಲ್ಲಿ ನಡೆದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಪಂದ್ಯವನ್ನು ಗೆದ್ದಿದ್ದ ಕೊಹ್ಲಿ ಬಳಗ, ಭಾರತೀಯದ ಹೃದಯವನ್ನೂ ಗೆದ್ದಿತ್ತು.

ಭಾರತ Vs ಪಾಕ್ ನಡುವಿನ ಹೈವೋಲ್ಟೇಜ್ ಪಂದ್ಯವನ್ನು ವೀಕ್ಷಿಸಲು ಬಾಲಿವುಡ್ ತಾರೆಗಳ ದಂಡೇ ಮ್ಯಾಂಚೆಸ್ಟರ್ಗೆ ತೆರಳಿತ್ತು. ಈ ಪೈಕಿ ನಟಿ ಊರ್ವಶಿ ರೌಟೇಲಾ, ಪಂದ್ಯದ ನಂತರ ಟೀಮ್ ಇಂಡಿಯಾ ನಾಯಕನನ್ನು ಮೈದಾನದಲ್ಲೇ ಬಿಗಿದಪ್ಪಿಕೊಂಡಿದ್ದಾರೆ. ಆದರೆ ಊರ್ವಶಿ ಅಪ್ಪಿಕೊಂಡದ್ದು ನಿಜವಾದ ವಿರಾಟ್ ಕೊಹ್ಲಿ ಅವರನ್ನಲ್ಲ, ಬದಲಾಗಿ ಮೈದಾನದಲ್ಲಿ ಇರಿಸಲಾಗಿದ್ದ ವಿರಾಟ್ ಕೊಹ್ಲಿ ಅವರ ಮೇಣದ ಪ್ರತಿಮೆಯನ್ನು. ಈ ಚಿತ್ರವನ್ನು ಸ್ವತಃ ಊರ್ವಶಿ ರೌಟೇಲ್ ಅವರೇ ಟ್ವೀಟ್ ಮಾಡಿದ್ದಾರೆ.

ಐಸಿಸಿ ವಿಶ್ವಕಪ್ನಲ್ಲಿ ಭಾರತ ತಂಡ ಜೂನ್ 22ರಂದು ಸೌಥಾಂಪ್ಟನ್ನಲ್ಲಿ ನಡೆಯಲಿರುವ ತನ್ನ 5ನೇ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡವನ್ನು ಎದುರಿಸಲಿದೆ.

LEAVE A REPLY

Please enter your comment!
Please enter your name here

seventeen − five =