ಕಾರ್ಪೊರೇಟ್ ಕ್ರಿಕೆಟ್: ಲಾರ್ಡ್ಸ್’ನಲ್ಲಿ ಕಿಚ್ಚ ಸುದೀಪ್ ತಂಡ ಚಾಂಪಿಯನ್

0

ಲಂಡನ್, ಜೂನ್ 14: ಇಂಗ್ಲೆಂಡ್‌ನ ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ನಡೆದ ಕಾರ್ಪೊರೇಟ್ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಸ್ಯಾಂಡಲ್‌ವುಡ್ ಸೂಪರ್ ಸ್ಟಾರ್, ಕಿಚ್ಚ ಸುದೀಪ್ ನಾಯಕತ್ವದ ವಿಷನೇರ್ ತಂಡ ಸತತ 2ನೇ ಬಾರಿ ಪ್ರಶಸ್ತಿ ಗೆದ್ದುಕೊಂಡಿದೆ.  12 ತಂಡಗಳು ಭಾಗವಹಿಸಿದ್ದ ಟೂರ್ನಿಯಲ್ಲಿ ಸುದೀಪ್ ಸಾರಥ್ಯದ ತಂಡ ಮತ್ತೊಮ್ಮೆ ಚಾಂಪಿಯನ್ ಪಟ್ಟಕ್ಕೇರಿದೆ.

ವಿಷನೇರ್ ತಂಡದ ಪರ ಇಂಗ್ಲೆಂಡ್ ನ ಮಾಜಿ ಕ್ರಿಕೆಟಿಗ ಓವೈಸ್ ಶಾ, ಸಿಸಿಎಲ್ ಕರ್ನಾಟಕ ಬುಲ್ಡೋಜರ್ಸ್ ತಂಡದ ಆಟಗಾರರಾದ ಪ್ರದೀಪ್, ರಾಜೀವ್ ಆಡಿದ್ದರು. ಅಲ್ಲದೆ ತೆಲುಗು ಹಾಗೂ ಮಲಯಾಳಂ ಚಿತ್ರರಂಗದ ಕೆಲ ಆಟಗಾರರೂ ಸುದೀಪ್ ತಂಡದಲ್ಲಿದ್ದರು.

ಪ್ರಬಲ ಪೈಪೋಟಿಯಿಂದ ಕೂಡಿದ ಟೂರ್ನಿಯಲ್ಲಿ ವಿಷನೇರ್ ತಂಡ ಚಾಂಪಿಯನ್ ಆಗಿದೆ. ಅದ್ದೂರಿ ಸ್ವಾಗತ, ಅತ್ಯುತ್ತಮ ಸತ್ಕಾರ ನೀಡಿದ ಲಾರ್ಡ್ಸ್ ಆಡಳಿತ ಮಂಡಳಿಗೆ ಧನ್ಯವಾದ. ಕಳೆದ ಬಾರಿ ತಂಡದಲ್ಲಿದ್ದು, ಈ ಬಾರಿ ಅಗಲಿರುವ ನಟ ಧ್ರುವನಿಗೆ ಈ ಟ್ರೋಫಿ ಅರ್ಪಿಸುತ್ತಿದ್ದೇವೆ              – ಕಿಚ್ಚ ಸುದೀಪ್, ವಿಷನೇರ್ ತಂಡದ ನಾಯಕ.

LEAVE A REPLY

Please enter your comment!
Please enter your name here

4 − two =