ಟೀಮ್ ಇಂಡಿಯಾ ಜರ್ಸಿಯಲ್ಲಿ ವಿಂಗ್ ಕಮಾಂಡರ್… ವೀರಯೋಧ ಅಭಿಗೆ ಬಿಸಿಸಿಐ ಗೌರವ

0
PC: Twitter/BCCI

ಪಾಕಿಸ್ತಾನದ ವಶದಿಂದ ಶುಕ್ರವಾರ ಭಾರತಕ್ಕೆ ಮರಳಿರುವ ವೀರ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರಿಗೆ ಬಿಸಿಸಿಐ ಗೌರವ ಸಲ್ಲಿಸಿದೆ.

ಭಾರತ ಕ್ರಿಕೆಟ್ ತಂಡದ ಹೊಸ ಜರ್ಸಿ ಬಿಡುಗಡೆಯಾಗಿದ್ದು, ನಂ.1 ಜರ್ಸಿಯಲ್ಲಿ ವಿಂಗ್ ಕಮಾಂಡರ್ ಅಭಿನಂದನ್ ಎಂದು ಬರೆಯುವ ಮೂಲಕ ಪಾಕಿಸ್ತಾನದಲ್ಲಿ ಭಾರತದ ಘನತೆಯನ್ನು ಎತ್ತಿ ಹಿಡಿದ ಅಭಿನಂದನ್ ಅವರಿಗೆ ಗೌರವ ಸಲ್ಲಿಸಲಾಗಿದೆ.

ಭಾರತದ ವಾಯುಪಡೆಯ ಯುದ್ಧವಿಮಾನ ಮಿಗ್-21ರ ಪೈಲಟ್ ಆಗಿರುವ ಅಭಿನಂದನ್ ಬುಧವಾರ ಭಾರತದ ಗಡಿ ದಾಟಿದ್ದ ಪಾಕಿಸ್ತಾನದ ಎಫ್-16 ವಿಮಾನಗಳನನ್ನು ಹಿಮ್ಮೆಟ್ಟಿಸಿದ್ದರು. ಈ ಸಂದರ್ಭದಲ್ಲಿ ನಡೆದ ಅಪಘಾತದಲ್ಲಿ ಅಭಿನಂದನ್ ಚಲಾಯಿಸುತ್ತಿದ್ದ ಭಾರತದ ಮಿಗ್-21 ವಿಮಾನ ಪಾಕಿಸ್ತಾನದ ಗಡಿಯಲ್ಲಿ ಪತನಗೊಂಡಿತ್ತು. ಪ್ಯಾರಾಚೂಟ್ ಮೂಲಕ ಜಿಗಿದು ಪ್ರಾಣ ಉಳಿಸಿಕೊಂಡಿದ್ದ ಅಭಿನಂದನ್ ಪಾಕಿಸ್ತಾನ ನೆಲದಲ್ಲಿ ಬಿದ್ದಿದ್ದರು. ನಂತರ ಅವರನ್ನು ಬಂಧಿಸಿದ್ದ ಪಾಕಿಸ್ತಾನ ಸೇನೆ, ಶುಕ್ರವಾರ ರಾತ್ರಿ ಬಿಡುಗಡೆಗೊಳಿಸಿತ್ತು.

ಪಾಕಿಸ್ತಾನದಲ್ಲಿದ್ದಾಗ ಅಲ್ಲಿನ ಮಿಲಿಟರಿ ಅಧಿಕಾರಿಗಳ ಮುಂದೆ ಧೈರ್ಯ ಪ್ರದರ್ಶಿಸಿದ್ದ ಅಭಿನಂದನ್ ಭಾರತೀಯ ಸೇನೆಗೆ ಸಂಬಂಧಪಟ್ಟ ಯಾವುದೇ ರಹಸ್ಯವನ್ನು ಬಿಟ್ಟುಕೊಟ್ಟಿರಲಿಲ್ಲ. ಅಲ್ಲದೆ ಸೆರೆಯಾಗುವ ಮುನ್ನವೇ ತಮ್ಮಲ್ಲಿದ್ದ ರಹಸ್ಯ ದಾಖಲೆಗಳನ್ನು ನುಂಗಿ ಹಾಕಿದ್ದರು.

ಶುಕ್ರವಾರ ದೇಶಕ್ಕೆ ಮರಳಿರುವ ವಿಂಗ್ ಕಮಾಂಡರ್ ಅಭಿನಂದನ್ ಅವರಿಗೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ.

LEAVE A REPLY

Please enter your comment!
Please enter your name here

4 × four =