ನಾಯಿಯೊಂದಿಗೆ ‘ಹಾಕಿ’ ಆಡಿದ ಮಹಿಳಾ ಕ್ರಿಕೆಟರ್ ಜೆಮೈಮಾ..!

0

ಬೆಂಗಳೂರು, ಮೇ 19: ಮಂಗಳೂರು ಮೂಲದ ಮುಂಬೈ ಆಟಗಾರ್ತಿ ಜೆಮೈಮಾ ರಾಡ್ರಿಗ್ಸ್ ಮಹಿಳಾ ಕ್ರಿಕೆಟ್ ತಂಡದ ಉದಯೋನ್ಮುಖ ಆಟಗಾರ್ತಿ. 18 ವರ್ಷದ ಬಲಗೈ ಬ್ಯಾಟರ್ ಜೆಮೈಮಾ ಅತ್ಯಂತ ಕಡಿಮೆ ಅವಧಿಯಲ್ಲೇ ಮಿಂಚಿನ ಆಟ ಪ್ರದರ್ಶಿಸಿ ಟೀಮ್ ಇಂಡಿಯಾದ ಭವಿಷ್ಯದ ತಾರೆ ಎನಿಸಿಕೊಂಡಿದ್ದಾರೆ.

ಪ್ರತಿಭಾವಂತೆ ಕ್ರಿಕೆಟರ್ ಆಗಿರುವ ರಾಡ್ರಿಗ್ಸ್ ಹಾಕಿ ಆಟಗಾರ್ತಿಯೂ ಹೌದು. ಕ್ರಿಕೆಟ್ ಜೊತೆಗೆ ಹಾಕಿಯನ್ನೂ ಆಡುತ್ತಾ ಬೆಳೆದ ಹುಡುಗಿ ಜೆಮೈಮಾ. ಇದೀಗ ಕುಡ್ಲದ ಕುವರಿ ಜೆಮೈಮಾ ತಮ್ಮ ಸಾಕು ನಾಯಿಯೊಂದಿಗೆ ಹಾಕಿ ಫೀಲ್ಡ್ ನಲ್ಲಿ ಹಾಕಿ ಆಡುವ ಮೂಲಕ ಗಮನ ಸೆಳೆದಿದ್ದಾರೆ. ಅಲ್ಲದೆ ಈ ವೀಡಿಯೊವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿದ್ದಾರೆ.

18 ವರ್ಷದ ಜೆಮೈಮಾ ಭಾರತ ತಂಡದ ಪರ 10 ಏಕದಿನ ಹಾಗೂ 25 ಟಿ20 ಪಂದ್ಯಗಳನ್ನಾಡಿದ್ದಾರೆ. ಅಲ್ಲದೆ ಇತ್ತೀಚೆಗೆ ನಡೆದ ಮಹಿಳಾ ಟಿ20 ಚಾಲೆಂಜರ್ ಟೂರ್ನಿಯಲ್ಲಿ ಸರಣಿಶ್ರೇಷ್ಠರಾಗಿ ಮೂಡಿ ಬಂದಿದ್ದರು.

LEAVE A REPLY

Please enter your comment!
Please enter your name here

seven − 4 =