‘ಲಯನ್ ಜಿಂದಾ ಹೈ’: ಚಿನ್ನಸ್ವಾಮಿಯಲ್ಲಿ ಹ್ಯಾಟ್ರಿಕ್ ಸಿಕ್ಸರ್ಸ್ ಸಿಡಿಸಿದ ಕಿಂಗ್..!

0
PC: Mumbai Indians/Twitter

ಬೆಂಗಳೂರು, ಮಾರ್ಚ್ 28: ಭಾರತದ ವಿಶ್ವಕಪ್ ಹೀರೊ ಯುವರಾಜ್ ಸಿಂಗ್ ಸಿಕ್ಸರ್ ಕಿಂಗ್ ಎಂದೇ ಫೇಮಸ್. ಆದರೆ ಇತ್ತೀಚೆಗೆ ಯುವರಾಜ್ ಸಿಂಗ್ ತಮ್ಮ ಹಳೆಯ ಖದರ್ ಕಳೆದುಕೊಂಡಿದ್ದಾರಾ ಅನ್ನೋ ಪ್ರಶ್ನೆ ಮೂಡಿತ್ತು. ಆ ಪ್ರಶ್ನೆಗಳಿಗೆ ಯುವಿ ತಮ್ಮ ಸ್ಟೈಲ್ ನಲ್ಲೇ ಉತ್ತರಿಸಿದ್ದಾರೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಹ್ಯಾಟ್ರಿಕ್ ಸಿಕ್ಸರ್ಸ್ ಸಿಡಿಸುವ ಮೂಲಕ ಅಬ್ಬರಿಸಿದ್ದಾರೆ ಸಿಕ್ಸರ್ ಕಿಂಗ್ ಯುವಿ. ಮುಂಬೈ ಇಂಡಿಯನ್ಸ್ ಪರ ಆಡುತ್ತಿರುವ 37 ವರ್ಷದ ಯುವರಾಜ್ ಸಿಂಗ್, ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಅವರ ಬೌಲಿಂಗ್ ನಲ್ಲಿ ಸತತ ಮೂರು ಸಿಕ್ಸರ್ಸ್ ಸಿಡಿಸಿದರು. 14ನೇ ಓವರ್ ನ ಮೊದಲ ಮೂರೂ ಎಸೆತಗಳನ್ನು ಸಿಕ್ಸರ್ ಗಟ್ಟಿದ ಯುವಿ 12 ಎಸೆತಗಳಲ್ಲಿ 12 ರನ್ ಸಿಡಿಸಿ ಅದೇ ಓವರ್ ನ 4ನೇ ಎಸೆತದಲ್ಲಿ ಔಟಾದರು.

ಭಾರತಕ್ಕೆ ಎರಡು ವಿಶ್ವಕಪ್ ಗೆಲ್ಲಿಸಿಕೊಟ್ಟಿರುವ ಯುವರಾಜ್ ಸಿಂಗ್ ಈ ಹಿಂದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡಿದ್ದಾರೆ.

LEAVE A REPLY

Please enter your comment!
Please enter your name here

two × one =